ಡಾ.ದೊಡ್ಡರಂಗೇಗೌಡರ ಅಭಿಮಾನಿಯ ಚಿತ್ರ ಹಳ್ಳಿ ಸೊಗಡು
Posted date: 27 Wed, Jul 2016 – 10:40:57 AM

ಸುಮಾರು ೯೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನೃತ್ಯನಿರ್ದೇಶಕನಾಗಿ ಕಾರ್ಯನಿರ್ವಹಿಸಿ ಹೆಸರು ಮಾಡಿರುವ  ಎಂ.ಆರ್. ಕಪಿಲ್ ಅವರು ಇತ್ತೀಚೆಗಷ್ಟೇ ೪ ದಶಕಗಳ ಇತಿಹಾಸ ಹೊಂದಿರುವ ಫಲಿತಾಶ ಎನ್ನುವ ಶೀರ್ಷಿಕೆಯನ್ನಿಟ್ಟುಕೊಂಡು ಹೊಸ ಚಿತ್ರವೊಂದನ್ನು ನಿರ್ದೇಶಿಸಿದ್ದರು. ಆ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕಾರ್ಯ ಅಂತಿಮ ಹಂತದಲ್ಲಿರುವಾಗಲೇ ಇದೀಗ ಮತ್ತೊಂದು ಚಿತ್ರದ ನಿರ್ದೇಶನಕ್ಕೆ  ಅವರು ಕೈಹಾಕಿದ್ದಾರೆ.
     ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ಅಪ್ಪಟ ಅಭಿಮಾನಿಯೊಬ್ಬನ ಜೀವನದ ಕಥಾನಕವನ್ನು ಹೊಂದಿರುವ ಈ ಚಿತ್ರವು ಮುಂದಿನ ತಿಂಗಳು ಸೆಟ್ಟೇರಲು ಸಿದ್ದವಾಗುತ್ತಿದೆ. ಹಳ್ಳಿ ಸೊಗಡು ಎಂಬ ಹೆಸರಿನ ಈ ಚಿತ್ರದಲ್ಲಿ ಯುವನಟ ಆರವ್ ಸೂರ್ಯ ಹಾಗೂ ಅಕ್ಷರ ನಾಯಕ-ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಮಧುಗಿರಿ ತಾ. ಕುರುಬರಹಳ್ಳಿ ಗ್ರಾಮದವರಾದ ಡಾ.ದೊಡ್ಡರಂಗೇಗೌಡ ಅವರು ತಮ್ಮ ೭೦ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಕೊಡುಗೆಯಾಗಿ ಈ ಚಿತ್ರವನ್ನು ಅರ್ಪಿಸುತ್ತಿದ್ದೇವೆ ಎಂದು ನಿರ್ದೇಶಕರಾದ ಕಪಿಲ್ ತಿಳಿಸಿದ್ದಾರೆ.
     ಈ ಚಿತ್ರದ ನಾಯಕ ಒಬ್ಬ ಸಂಗೀತ ಪ್ರೇಮಿಯಾಗಿದ್ದು, ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ಅಪ್ಪಟ ಅಭಿಮಾನಿಯಾಗಿರುತ್ತಾನೆ. ಆತ ನಂಬಿದ ಸಂಗೀತವೇ ಆತನ ಜೀವನವನ್ನು ಕಾಪಾಡುತ್ತದೆ. ಸಂಗೀತಕ್ಕೆ ಎಂಥಾ ಶಕ್ತಿ ಇದೆ ಎಂದು ಈ ಚಿತ್ರದ ಮೂಲಕ ನಿರ್ದೇಶಕರು ಹೇಳಹೊರಟಿದ್ದಾರೆ. ದೊಡ್ಡರಂಗೇಗೌಡರು ಈ ಚಿತ್ರದಲ್ಲಿ ತಮ್ಮದೇ ಪಾತ್ರವನ್ನು ನಿರ್ವಹಿಸಲಿದ್ದಾರೆ.  ಕಪಿಲ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನೃತ್ಯ ಹಾಗೂ ನಿರ್ದೇಶನ ಮಾಡುತ್ತಿದ್ದು, ಪತ್ರಕರ್ತೆಯಾದ ಬಿ.ಎನ್.ಪಂಕಜಾ ಅವರು ಸಂಭಾಷಣೆಗಳನ್ನು ರಚಿಸಿದ್ದಾರೆ.  ಬರುವ ಆ. ೨೮ಕ್ಕೆ ಈ ಚಿತ್ರದ ಮುಹೂರ್ತ ನಡೆಯಲಿದೆ. ರಾಗರಮಣ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಆ.೭ರಂದು ನೆರವೇರಲಿದೆ.  ರಾಜೇಂದ್ರ ಸೂರಿ ಪ್ರೊಡಕ್ಷನ್ಸ್ ಅಡಿಯಲ್ಲಿ ಪಿ. ಸತೀಶ್‌ಕುಮಾರ್ ಮೆಹತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.  ಹೆಚ್.ಎನ್. ದತ್ತಾತ್ರೇಯ, ಮಹಂತೇಶ ಕೆ.ಎಸ್, ಬಿ.ಎನ್. ಸ್ವಾಮಿ ಹಾಗೂ ರಜತ್ ರಂಗನಾಥ್ ಈ ಚಿತ್ರದ ಸಹ ನಿರ್ಮಾಪಕರು.
ತಾರಾಗಣದಲ್ಲಿ ಆರವ್ ಸೂರ್ಯ, ಅಕ್ಷರಾ, ಶಂಕರ್ ಭಟ್, ಜ್ಯೋತಿ, ಡಿಂಗ್ರಿ ನಾಗರಾಜ್, ಮೈಸೂರು ರಮಾನಂದ್, ಶಂಕನಾದ ಅರವಿಂದ, ಮೈಕಲ್ ಮಧು, ಹೆಚ್.ಎನ್. ದತ್ತಾತ್ರೇಯ, ಮಾಲತೇಶ್ ಕೆ.ಎಸ್., ಹೆಚ್.ಎನ್. ಸಿದ್ದಪ್ಪ ಮತ್ತು ಡಾ. ವೆಂಕಟರಮಣ ಸೇರಿದಂತೆ ಇನ್ನೂ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed